Friday, March 14, 2014

ಹಳೆಯ ಭಾವಗೀತೆ


ಸಮೀಪ ಬರುವೆ ಏನು
ನಿನ್ನ ಕಣ್ಣ ನೂಡಬೇಕಿದೆ.. 
ಕಳೆದು ಹೋದ ನನ್ನ 
ಅದರೊಳಗೆ ಹುಡುಕಬೇಕಿದೆ. 

ಸಂಕೋಚ ಆಗದೇನು 
ನೀ ಹೀಗೆ ಕರೆದರೆ.. 
ಸುಳಿವು ನೀಡದೇನೆ 
ನೀ ಬಳಿಗೆ ಬಂದರೆ 

ಹೆಸರು ಹಿಡಿದು ನೀನು 
ಕರೆದಾಗ ಪುಳಕವು 
ನಿನ್ನತ್ತ ಹೊರಳಿ ನಾನು 
ಆ ಕ್ಷಣಕೆ ಮೂಕನು 

ಹಳೆಯ ಭಾವಗೀತೆ 
ಹೊಸ ರೂಪ ಪಡೆದಿದೆ 
ಸಾಹಿತ್ಯ ನುಡಿದ ಹಾಗೆ  
ನೀ ನಿಲ್ಲದೆ ನನಗೇನಿದೆ ?