Thursday, November 26, 2015

ಭೂಮಿಗೀತೆಗೆ ಕಿರಣ

ನೀನೇ ಪಲ್ಲವಿ
ನೀನೇ ಚರಣ
ಈ ಭೂಮಿಗೀತೆಗೆ
World Environment Day One Planet One Future
ನೀನೇ ಕಿರಣ

ಕನಸಾಗಿ ಕಣ್ಣಬಿಟ್ಟಾಗ,
ತಂಗಾಳಿ ತೂರಿಬಂದಾಗ
ನಿನ್ನ ನೆನಪು ಕಾರಣವಿರದೆ ನಗಿಸುತಿದೆ
ಈ ಜೀವ ಒಳಗೊಳಗೇನೆ ಕುಣಿಯುತಿದೆ 

ಸೊಗಸು ಎದುರು ಕಂಡಂತೆ
ಬಯಕೆ ಬಗಲು ಬಂದಂತೆ
ನೀ ಎದುರು ಹಾಗೆ ಬಂದು ನಿಂತಾಗ
ಈ ಎದೆಯೋಳಗೆಲ್ಲಾ ಏನೋ ಆವೇಗ

ಹೊಸದಾದ ದಾರಿ ಎದುರಲ್ಲಿ
ಬೆಳಕು ಇರದ ಇರುಳಲ್ಲಿ
ನೀ ನಗೆಯ ದೀವಿಗೆ ಹಿಡಿದು ಕರೆದಾಗ
ಜಗವೆಲ್ಲಾ ಹಾಗೇ ನಿಲ್ಲಲಿ ಏನೀಗ ?



Sunday, July 19, 2015

ನೆನಪು

ನಿನ್ನೆಯ ನೆನಪನ್ನು ನಾಳೆಗೆ
ಹೊತ್ತುಕೊಂಡು ಬರುವೆ ನಾ ಕೂಲಿಗೆ
ಜೊತೆಯಲ್ಲೇ ಬರುವೆ
ಜತನದಲಿ ತರುವೆ
ಬೇಕಾದ ನೆನಪನ್ನು ಹೆಕ್ಕಿ
ಕ್ಷಣಮಾತ್ರದಲ್ಲೇ ಕೊಡುವೆ .....


ಗುಂಪಲ್ಲಿ ಕಲಹ ಮನೆಯಲ್ಲಿ ವಿರಹ
ಕಾವೇರಿರಲು  ವಿಷಘಳಿಗೆ
ನೆನಪಿಸುವೆ ಮನೆಯವರ ನೆರವು
ಜೊತೆ ನಿಂತ ಸ್ನೇಹಿತರ ಸಲಿಗೆ 

ಹೊಸದೊಂದು ಕಾರ್ಯ,  ನಡುಗಿರಲು  ಸ್ಥೈರ್ಯ
ಕಾದಿರಲು ಎದುರಲ್ಲಿ  ಸೋಲೇ
ಕಳೆದ ದಿನಗಳನ್ನೆಲ್ಲಾ ಅನುಭವವಗೊಳಿಸಿ
ಕೈಗಿಡುವೆ  ವಿಜಯದ ಮಾಲೆ


ನೀನೆದ್ದು ಬಂದಾಗ, ಮೇಲೆದ್ದು ಗೆದ್ದಾಗ
ಸುತ್ತೆಲ್ಲ ಮೊಳಗಿರಲು ನಗಾರಿ
 ಜಂಬವನು ಜಗ್ಗಿ, ಕಿವಿಯಲ್ಲಿ ಬಗ್ಗಿ  
ನೆನಪಿಸಿವೆ ನೀ ನಡೆದ  ದಾರಿ 



Tuesday, April 7, 2015

ಹೂಕ್ಕಿ ನೋಡು ಅಂತರಾಳ, ಒಲವೆ ಸಾಕ್ಷಿ!


"Karmoda Saridu" song from Mr & Mrs Ramachari film, simply enchants the listener both by its  amazing musical composition & its equally awesome lyrics!
I started listening to this often and then couldn't resist writing few lines of my own to the tunes of it.
And so, an update  to the blog follows!


ಜೊತೆಗೆ ಕೊನೆಯ ಬಾರಿ
ನಡೆದ ಹಳೆಯ ದಾರಿ
ನಿನ್ನ ಹೆಜ್ಜೆ ಗುರುತ ಮಾತ್ರ ಅಳಿಸುತಿಲ್ಲ
ಹೊಸ ಪ್ರಯಾಣ ಇಂದೇಕೋ
ಬಿಗು ದುಮ್ಮಾನ ಇಂದೇಕೋ
ಹತ್ತಿರವಾಯ್ತೆ...
ಕೊನೆಯ ನಿಲ್ದಾಣ......

ಒಲವ ಸಣ್ಣ ಹಣತೆ
ಇರುಳನ್ನು ಸೀಳದಾಯ್ತೆ
ಮೌನದಲ್ಲೇ ಹುದುಗಿಹೋದ
ಭಾವಗೀತೆ
ತಿಳಿ ಕಣ್ಣಲ್ಲಿ ಆವೇಶ
ಏನೋ ಮನದಲ್ಲಿ ಆಕ್ರೋಶ
ಮರೆತುಹೋಯ್ತೆ....
ಪ್ರೇಮದ ಸಂದೇಶ

ಒಮ್ಮೆ ಕಣ್ಣ ಮುಚ್ಚಿ
ಎಲ್ಲಾ ತೆರೆಯ ಕಳಚಿ
ಹೂಕ್ಕಿ ನೋಡು ಅಂತರಾಳ
ಒಲವೆ ಸಾಕ್ಷಿ
ಹಳೆ ವಿವಾದ ಮುದುಡಿಟ್ಟು
ಹೊಸ ಸಂವಾದ ಶುರುವಿಟ್ಟು
ಆರಂಭವಾಗಲಿ ...
ಸಂಸಾರದ ಉನ್ಮಾದ