Syntatic Sugar
Solution will be simple..
Tuesday, May 30, 2017
ನಾನು ನೀನು
ನಾನೇ ಕವನ
ನೀ ಬರೆಯೋ ಕವಿ
ಪದಗಳಿಗೆಲ್ಲಾ ನನದೊಂದೇ ಅಹವಾಲು
ಸಿಗದಿರಲಿ ನಿನಗೆ ಮುಗಿಸೋ ಸಾಲು.
ನೀನೇ ದಾರಿ
ನಡೆಯೋ ಬಂಡಿ
ಉರುಳುತ್ತಾ ನಾ ನಡೆಯುವೆನು
ನೀ ಮುಗಿಯುವ ಭಯದಿ.
ನೀನೇ ಜೈಲು
ನಾ ಬಿಡುಗಡೆಗೆ ಹೆದರುವ ಖೈದಿ
ನೀನೇ ಸಮಯ
ನಾ ಮರಳಿ ಬರುವ ಯುಗಾದಿ .
Newer Posts
Older Posts
Home
Subscribe to:
Posts (Atom)