Thursday, July 4, 2019

ಇದ್ದಿದ್ದು ಇರೋದಿಲ್ಲೋ



ಇದ್ದಿದ್ದು ಇರೋದಿಲ್ಲೋ ತಮ್ಮ
ಇದ್ದಿದ್ದು ಇರೋದಿಲ್ಲೋ
Image result for not permanent

ಇದ್ದಂಗಿರೋದಿಲ್ಲೋ ತಮ್ಮ
ಇದ್ದಿದ್ದು ಇರೋದಿಲ್ಲೋ

ನೆತ್ತಿಮ್ಯಾಗಿನ ಕೂದಲು
ಕಪ್ಪಗಿರೋದಿಲ್ಲೋ
ಹಂಗೆ ಬಿಟ್ಟ ಬೆಳ್ಳಿ ಕೂಡ
ಬೆಳ್ಳಗಿರೋದಿಲ್ಲೋ

ಆದಿಲ್ ಶಾಹ ಬಾದಶಾ
ಒಬ್ಬರು ಉಳಿದಿಲ್ಲೋ
ಮರದ ಮ್ಯಾಗಿನ ಚಂದ ಹಸಿರು
ಬ್ಯಾಸ ಗೀಗೆ ಬರೋದಿಲ್ಲೋ

ಇಂದಿನ ನಿನ್ನ ಬಾಳು
ನಾಳಿಗೆ ಇರೋದಿಲ್ಲೋ
ನಾಳಿಗೆ ಬರೋ ಗೋಳು
ನಾಡಿದ್ದಿಗೆ ಇರೋದಿಲ್ಲೋ ..