Friday, January 21, 2011

ಇಬ್ಬರು ಮೂಕರು

ಆ ಕೋಣೆಲಿ ಅವರಿಬ್ಬರೇ ಇದ್ದರು . ರಾಮು ಅಲ್ಲಿಗೆ ಮೊದಲು ಬಂದವ.ಅವನಿಗೆ ತಾನು  ಯಾಕೆ,ಹೇಗೆ ಬಂದೆ ಅನ್ನೋ ಬಗ್ಗೆ ಒಂದು ನಯಾ ಪೈಸೆ ಅಷ್ಟು ನೆನಪಿಲ್ಲ . ರಾಮ  ಬಂದ ದಿನವೇ ಮಧ್ಯಾನ್ಹ ೨ ಘಂಟೆ ಸುಮಾರಿಗೆ ಭೀಮನ ಆಗಮನ ಆಯಿತು.  ಅಂದು ಅವರಿಬ್ಬರದು ಒಂದೇ ಪ್ರಶ್ನೆ , ನಾವು ಯಾಕಿಲ್ಲಿದಿವಿ,ಮತ್ತೆ ಮುಂದೇನಾಗುತ್ತೆ ?  ಆದರೆ ಅಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡೋ ಧ್ವನಿಗಳಯಾವುವೋ ಇರಲಿಲ್ಲ.

 ಪರಸ್ಪರ ಒಬ್ಬರನ್  ಒಬ್ಬರು ನೋಡಿದ ಅವರಿಗೆ ತಾವಿಬ್ಬರು ಮೂಕರು ಅನ್ನೋ ಅಂಶ ತಿಳಿಯಲು ಹೆಚ್ಚಿನ ಸಮಯವೇನು ಹಿಡಿಯಲಿಲ್ಲ.
  ಒಬ್ಬರಿಗೋಬ್ಬರು ಕಣ್ಣಲ್ಲೇ ಮಾತಾಡೋ  ಪ್ರಯತ್ ಮಾಡಿದ್ರು ಏನೋ ಪ್ರಯೋಜನ ಆಗ್ಲಿಲ್ಲ.
ರಾಮು ಕೆಲವೇ ಘಂಟೆಗಳ ಹಿಂದೆ ತನಗಾದ ಶಾಕ್ ನಿಂದ ಹೊರಬಂದಿದ್ದ.ಭೀಮನ ಇರುವಿಕೆ ಅವನಲ್ಲಿ ಕೊಂಚ ಧೈರ್ಯ ತಂದಿತ್ತು .

ದಿನದ ಬದಲಾವಣೆಗಳು ಭೀಮುವನ್ನುಆಶ್ಚರ್ಯಗೊಳಿಸಿದ್ವು,ಎಂದಿನಂತೆ ಹುಲ್ಲುಗಾವಲಲ್ಲಿ ತನ್ನ ಪಾಡಿಗೆ ಅಲೆಯುತಿದ್ದ ಅತನನ್ನ ದಡೂತಿ ದೇಹದ ಇಬ್ಬರು ಅನಾಮತ್ತಾಗಿ ಹಿಡಿದೆಳೆದಿದ್ದರು. ಕಾಲುಗಳನ್ನ ಸರಪಳಿಂದ ಬಿಗಿದು ಲಾರಿಯೊಳಗೆ ಹಾಕಿದ್ದೊಂದೇ  ಅವನಿಗಿರುವ ನೆನಪು .
ಭೀಮು ಜೋರಾಗಿ ಕೂಗಿದ,.ಬಿಡಿಸಿಕೊಳ್ಳಲು ಕೊಸರಡಿದ,  ಕೊನೆಗೆ ಅವನೆಲ್ಲ ಪ್ರತಿಭಟನೆಗಳು ಮುಗಿದಾಗ  ಸುಸ್ತಾಗಿ ನಿದ್ದೆ ಹೋದ. 
Its Not what you SAW ! !


ಬಹುಷಃ ರಾಮೂವಿಗೂ ಹೀಗೆ ಆಗಿರಬಹುದು ಎಂದೆನಿಸಿ ಕೋಣೆಯ ಬಾಗಿಲಿನತ್ತ ನೋಡುತಿರಲು,ದಡರ್ ಎಂದು ತೆಗೆದ ಬಾಗಿಲಿಗೆ  ಅರೆ ಕ್ಷಣ ಆತ  ನಡುಗಿ ಹೋದ .
ಬಾಗಿಲಿನಿಂದ ಇಬ್ಬರು ಧಡೂತಿ ದೇಹಿಗಳು ಒಳಬಂದರು . ಅವರ ಕೈಯಲಿದ್ದ ಮಚ್ಚನ್ನ ನೋಡಿ ರಾಮು ಮತ್ತೆ  ಮೂರ್ಚೆ ಹೋದ.ಭೀಮ ಅವರಿಬ್ಬರೇ ತನ್ನನ್  ಇಲ್ಲಿಗೆ ಎಳೆದು ತಂದಿದ್ದು ಎಂದು ಗುರುತಿಸಿದ . ಆ ದಡೂತಿಗಳೋ  ಭೀಮವಿಗೆ ಅರ್ಥವಾಗದ ಭಾಷೇಲಿ  ಮಾತ ನಾಡುತಿದ್ರು. ಭೀಮು ಅರ್ಥವಗಾದಿದ್ರು ಕeಳುತಹೋದ .

"ಲೇ ಇ ಸಲ ಹಬ್ಬದೂಟ ಬಹಳ ಮಜವಾಗಿ ಇರ್ಥತಿ , ಅವ್ನವನ್ನ  ೧೦೦ ರೊಪಾಯಿ ಹೆಚ್ಗಿ ಕೊಟ್ಟರು ಒಳ್ಳೆ  ಕುರಿಗಳನ ತಂದವಿ.
 ಅದ್ರಾಗೂ ನಮ್ಮ ಅವ್ವ ಮಟನ್ ಸಾರ್  ಮಸ್ತಾಗಿ ಮಾಡ್ಥಳ "  ಒಬ್ಬ ಇನ್ನೊಬ್ಬ ದಡೂತಿಗೆ ಹೇಳಿದ .
 ಇಬ್ಬರು  ಒಂದೊಂದು ಕುರಿಗಳನ್ನ  ಹೆಗಲ ಮೇಲೆ ಹೊತ್ತ್ಕೊಂಡು ಊರ ಹೊರಗಿನ ಕೆರೆಯ ಕಡೆ ಹೆಜ್ಜೆ
ಹಾಕಿದ್ರು .

ರಾತ್ರಿ ಎಂಟರ ಸುಮಾರಿಗೆ ರಾಮು ಭೀಮು ಇಬ್ಬರು ಹಬ್ಬದ ಊಟದ  ಮಟನ್ ಪೀಸಾಗಿದ್ರು..

Tuesday, January 18, 2011

ಅವಳಿಗೆಲ್ಲ ಹೇಳೋ ಮುನ್ನ

ಸಾಲು ಮರದ ನೆರಳಿನೊಳಗೆ
ನಗುತ ನಿಂತ ಅವಳ ಜೊತೆಗೆ
ಮನದ ಮಾತ ಹೇಳೋ ಘಳಿಗೆ                        
Happily Inspired
ಮಾತಿಗಿಂತ ಮೊದಲೇ ಅವಳ ಸೇರಿದೆ  
ಮರದ ಹೂವು ಜೋರು ಗಾಳಿಗೆ ..               

ದಡದಿ ಅವಳ ನಡುಗೆಗೆ
ಮೂಡೋ ಬಿಂಬ ನೀರಿಗೆ
ಮೆಲ್ಲ ಮುಟ್ಟಹೋದ ನನಗೆ
ನುಚ್ಚು ನೂರು ಕನಸು
ಯಾರೋ ಎಸೆದ ಕಲ್ಲಿಗೆ ...

ಮೂಡದ ಹಿಂದೆ ಅವಿತು ಕುಳಿತು
ಚಳಿಯಲಿ ನನ್ನೊಳಗೆ ಸಣ್ಣಗೆ ಬೆವೆತು
ಅವಳಿಗೆಲ್ಲ ಹೇಳೋ ಕ್ಷಣಕೆ
ಅವಿತ ಮೋಡ ಮಳೆಯಾಗಿ  ಕರಗಿದೆ
ಎಲ್ಲಿಂದಲೋ ಎದ್ದ ಸೂರ್ಯನ ಬಿಸಿಲಿಗೆ



 

Saturday, January 15, 2011

Go Green

                           Go Green

 Down the Mountain
Striving to sustain
Drying river cried
One last time Go Green.


Running for Cover
from the Raging Fire
Orphan deer with heart full of Fear
Cried one last time Go Green.

Flying Low with the Broken Wing
Butterfly caught in the Tornado swing
hoping for the change we bring
Cried one last time Go Green.


Deep in the Wood
Trapped in the Mud
Comes out the  mother earth
Says one last time Go Green...



Tuesday, January 4, 2011

ಹಂಚಿಕೊಂಡ ಕನಸು

ಕನಸನ್ನ ಬೇರೆಯವರಿಗೆ ಹೇಳೋದು , ಅಥವಾ ಬೇರೆಯವರಿಗೆ ಬಿದ್ದ ಕನಸಿನ ಬಗ್ಗೆ ಕೇಳೋದು ಅಂದ್ರೆ ಯಾರಿಗೆ ತಾನೆ ಇಷ್ಟ  ಇಲ್ಲ ?

ನೀವು ಮಲಗಿದ್ದಾಗ ಕನಸು,ನಿಮ್ಮಲ್ಲಿರೋ ಕಥೆಗಾರನನ್ನ ಜಾಡಿಸಿ ಒದ್ದು ಎಬ್ಬಿಸಿ ಕೂರಿಸುತ್ತೆ . ಆ ಕಥೆಗಾರನೋ ತುಂಬಾ ಮೂಡಿ . ಕೆಲುವು ಸಲ ಹಿಂದೆ ಎಂದೋ ನಡೆದ  ಘಟನೆ  ನೆನ್ಸ್ಕೊಂಡ್ರೆ ,ಇನ್ ಕೆಲುವು ಸಲ ನೀವು ಕೇಳರಿಯದ  ಜಾಗಗಳಿಗೆ ಕರ್ಕೊಂಡ್ ಹೋಗಿ  ನೀವು       ನೋಡಿರದ ವ್ಯಕ್ತ್ಹಿಗಳನೆಲ್ಲ ಮೀಟ್ ಮಾಡಿಸತಾನೆ .

ಕನಸುಗಳು  ಮನಸಿನ  ಕನ್ನಡಿ ಅಂತ ಕೆಲುವು ಸಲ ಅನಿಸಿದರೆ ಇನ್ನು ಕೆಲವು ಸಲ ಕನಸುಗಳೇ ಮನಸಿನ ಲಹರಿಗಳಿಗೆ ಮುನ್ನುಡಿ ಹಾಡ್ತವೆ ಅನ್ಸುತ್ತೆ.ರಾತ್ರಿ ಬಿದ್ದ ಕೆಟ್ಟ ಕನಸೊಂದು  ದಿನ ಪೂರ್ತಿಯನ್ನ  ದುಗುಡದಲ್ಲೇ ಕಳೆಯುವಂತೆ ಮಾಡಿದರೆ, ಯಾವ್ದೋ ದಿನ ನಡೆದ ಪ್ರಸಂಗ ಗಳು  ಕನಸಿನ ಲೋಕದಲ್ಲಿ ಮತ್ತೆ ಬಂದು ಕಾಡೋದು ಇದೆ.



 ಕನಸಲ್ಲಿ ಇರೋ ಇನ್ನೊದು ಮಜಾ ಏನಪ್ಪಾ ಅಂದ್ರೆ . ನಮ್ಮ  ಕನಸಲ್ಲಿ ಹೆಚ್ಚಿನ ಸಲ ನಾವೇ hero ಆಗಿರ್ಥಿವಿ ..  Example ಗೆ ಅಂದ್ರೆ ,

 ರಜನಿಕಾಂತ್ ತರ ಸುತ್ತ ನಿಂತರೋ ರೌಡಿಗಳನ್ನೆಲ್ಲ ಚಚ್ಚಿ  ಆಕಾಶಕ್ಕೆ ಎಸದು,ಪಕ್ಕ ನಿಂತಿರೋ ಹುಡುಗಿ ಕಡೆ ಸ್ಲೋ ಆಗಿ ತಿರ್ಗೋದು,
 Friends ಎಲ್ಲ ಟ್ರಿಪ್ ಹೋದಾಗ ಯಾರೋ ಕಾಲ್ಜಾರಿ ನೀರೊಳಗೆ ಬಿದ್ದರೆ ,ನಾವು ಹಾರಿ,ಈಜಿ ಕಾಪಾಡೋದು ( ನಿಜವಾಗ್ಲೂ ಈಜು ಬರಲ್ಲ ಅಂತ ನೆನಪಾಗೋದು ಬೆಳಗ್ಗೆ  ಎದ್ದಾಗಲೇ ).
ಬಾರಪ್ಪ ಪುಟ್ಟ ಅಂತ ಅಜ್ಜಿ ಇಷ್ಟ ಅಗೋ ತಿಂಡಿ ಮಾಡಿ ಕೊಡೋದು.
ಕಾಲೇಜ್ ನಲ್ಲಿ  ಪ್ರಿನ್ಸಿಪಾಲ್ ಕರೆದು ನೀನೆ ಕ್ರಿಕೆಟ್ captain  ಅಗ್ಬೇಕಪ್ಪ ಅನ್ನೋದು ( ನಿಮ್ಮನ್ನ ಕಾಲೇಜ್ ಕ್ರಿಕೆಟ್ ಟೀಂ ನಿಂದ ಬಿಟ್ಟಾಗ ಇ ತರ ಕನಸುಗಳು ಹೆಚ್ಚು).
ನಾರಾಯಣ್ ಮೂರ್ತಿ  ಬೆನ್ನಹಿಂದೆ ಬಂದು ಏನಪ್ಪಾ ಇಷ್ಟೊಂದು ಕಷ್ಟ ಪಟ್ಟು ಕೆಲಸ ಮಾಡ್ತೀಯ ಬೇಶ್ ಅನ್ನೋದು ..
ಒಟ್ನಲ್ಲಿ ಕನಸುಗಳ ಪ್ರಪಂಚ ಅದ್ಬುತ ...ನಿಮ್ಮ ಕನಸುಗಳ ಅನುಭವನ ಬೇರೆಯವರೊಂದಿಗೆ  ಹಂಚ್ಕೊಳ್ಳಿ ..

Whats your   Dream ?
PS : ಮೇಲೆ ಹೇಳಿದ ಯಾವದೇ ಕನಸುಗಳು ನನ್ನವಲ್ಲ...