Friday, January 21, 2011

ಇಬ್ಬರು ಮೂಕರು

ಆ ಕೋಣೆಲಿ ಅವರಿಬ್ಬರೇ ಇದ್ದರು . ರಾಮು ಅಲ್ಲಿಗೆ ಮೊದಲು ಬಂದವ.ಅವನಿಗೆ ತಾನು  ಯಾಕೆ,ಹೇಗೆ ಬಂದೆ ಅನ್ನೋ ಬಗ್ಗೆ ಒಂದು ನಯಾ ಪೈಸೆ ಅಷ್ಟು ನೆನಪಿಲ್ಲ . ರಾಮ  ಬಂದ ದಿನವೇ ಮಧ್ಯಾನ್ಹ ೨ ಘಂಟೆ ಸುಮಾರಿಗೆ ಭೀಮನ ಆಗಮನ ಆಯಿತು.  ಅಂದು ಅವರಿಬ್ಬರದು ಒಂದೇ ಪ್ರಶ್ನೆ , ನಾವು ಯಾಕಿಲ್ಲಿದಿವಿ,ಮತ್ತೆ ಮುಂದೇನಾಗುತ್ತೆ ?  ಆದರೆ ಅಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡೋ ಧ್ವನಿಗಳಯಾವುವೋ ಇರಲಿಲ್ಲ.

 ಪರಸ್ಪರ ಒಬ್ಬರನ್  ಒಬ್ಬರು ನೋಡಿದ ಅವರಿಗೆ ತಾವಿಬ್ಬರು ಮೂಕರು ಅನ್ನೋ ಅಂಶ ತಿಳಿಯಲು ಹೆಚ್ಚಿನ ಸಮಯವೇನು ಹಿಡಿಯಲಿಲ್ಲ.
  ಒಬ್ಬರಿಗೋಬ್ಬರು ಕಣ್ಣಲ್ಲೇ ಮಾತಾಡೋ  ಪ್ರಯತ್ ಮಾಡಿದ್ರು ಏನೋ ಪ್ರಯೋಜನ ಆಗ್ಲಿಲ್ಲ.
ರಾಮು ಕೆಲವೇ ಘಂಟೆಗಳ ಹಿಂದೆ ತನಗಾದ ಶಾಕ್ ನಿಂದ ಹೊರಬಂದಿದ್ದ.ಭೀಮನ ಇರುವಿಕೆ ಅವನಲ್ಲಿ ಕೊಂಚ ಧೈರ್ಯ ತಂದಿತ್ತು .

ದಿನದ ಬದಲಾವಣೆಗಳು ಭೀಮುವನ್ನುಆಶ್ಚರ್ಯಗೊಳಿಸಿದ್ವು,ಎಂದಿನಂತೆ ಹುಲ್ಲುಗಾವಲಲ್ಲಿ ತನ್ನ ಪಾಡಿಗೆ ಅಲೆಯುತಿದ್ದ ಅತನನ್ನ ದಡೂತಿ ದೇಹದ ಇಬ್ಬರು ಅನಾಮತ್ತಾಗಿ ಹಿಡಿದೆಳೆದಿದ್ದರು. ಕಾಲುಗಳನ್ನ ಸರಪಳಿಂದ ಬಿಗಿದು ಲಾರಿಯೊಳಗೆ ಹಾಕಿದ್ದೊಂದೇ  ಅವನಿಗಿರುವ ನೆನಪು .
ಭೀಮು ಜೋರಾಗಿ ಕೂಗಿದ,.ಬಿಡಿಸಿಕೊಳ್ಳಲು ಕೊಸರಡಿದ,  ಕೊನೆಗೆ ಅವನೆಲ್ಲ ಪ್ರತಿಭಟನೆಗಳು ಮುಗಿದಾಗ  ಸುಸ್ತಾಗಿ ನಿದ್ದೆ ಹೋದ. 
Its Not what you SAW ! !


ಬಹುಷಃ ರಾಮೂವಿಗೂ ಹೀಗೆ ಆಗಿರಬಹುದು ಎಂದೆನಿಸಿ ಕೋಣೆಯ ಬಾಗಿಲಿನತ್ತ ನೋಡುತಿರಲು,ದಡರ್ ಎಂದು ತೆಗೆದ ಬಾಗಿಲಿಗೆ  ಅರೆ ಕ್ಷಣ ಆತ  ನಡುಗಿ ಹೋದ .
ಬಾಗಿಲಿನಿಂದ ಇಬ್ಬರು ಧಡೂತಿ ದೇಹಿಗಳು ಒಳಬಂದರು . ಅವರ ಕೈಯಲಿದ್ದ ಮಚ್ಚನ್ನ ನೋಡಿ ರಾಮು ಮತ್ತೆ  ಮೂರ್ಚೆ ಹೋದ.ಭೀಮ ಅವರಿಬ್ಬರೇ ತನ್ನನ್  ಇಲ್ಲಿಗೆ ಎಳೆದು ತಂದಿದ್ದು ಎಂದು ಗುರುತಿಸಿದ . ಆ ದಡೂತಿಗಳೋ  ಭೀಮವಿಗೆ ಅರ್ಥವಾಗದ ಭಾಷೇಲಿ  ಮಾತ ನಾಡುತಿದ್ರು. ಭೀಮು ಅರ್ಥವಗಾದಿದ್ರು ಕeಳುತಹೋದ .

"ಲೇ ಇ ಸಲ ಹಬ್ಬದೂಟ ಬಹಳ ಮಜವಾಗಿ ಇರ್ಥತಿ , ಅವ್ನವನ್ನ  ೧೦೦ ರೊಪಾಯಿ ಹೆಚ್ಗಿ ಕೊಟ್ಟರು ಒಳ್ಳೆ  ಕುರಿಗಳನ ತಂದವಿ.
 ಅದ್ರಾಗೂ ನಮ್ಮ ಅವ್ವ ಮಟನ್ ಸಾರ್  ಮಸ್ತಾಗಿ ಮಾಡ್ಥಳ "  ಒಬ್ಬ ಇನ್ನೊಬ್ಬ ದಡೂತಿಗೆ ಹೇಳಿದ .
 ಇಬ್ಬರು  ಒಂದೊಂದು ಕುರಿಗಳನ್ನ  ಹೆಗಲ ಮೇಲೆ ಹೊತ್ತ್ಕೊಂಡು ಊರ ಹೊರಗಿನ ಕೆರೆಯ ಕಡೆ ಹೆಜ್ಜೆ
ಹಾಕಿದ್ರು .

ರಾತ್ರಿ ಎಂಟರ ಸುಮಾರಿಗೆ ರಾಮು ಭೀಮು ಇಬ್ಬರು ಹಬ್ಬದ ಊಟದ  ಮಟನ್ ಪೀಸಾಗಿದ್ರು..

No comments:

Post a Comment