Saturday, March 30, 2013

ನದಿಯ ನೀರು

ನದಿಯ ನೀರು ತೆರಳಿ ಸಾಗಿ
ಸೇರುತಿರಲಿ ಸಾಗರ
ಮೋಡವಾಗಿ ಮತ್ತೆ ಬರಲಿ
ಕಾಯುತಿಹುದು ಮನೆಯ ಹಂದರ

ಗಾಳಿಯಲ್ಲಿ ತೂರಿಬಿಟ್ಟ ರಾಗ
ಭಾವತೀರ ಮುಟ್ಟಲಿ
ಕಾವ್ಯವಾಗಿ ಭವ್ಯವಾಗಿ
ನಮ್ಮದೆ ದಡವ  ಸೇರಲಿ

ಬಣ್ಣಗಳೊಡನೆ ನಲಿವ ಬಿಲ್ಲು
ದ್ವೀಪಗಳನು ಬೆಸೆಯಲಿ
ದೂರವಿರುವ ಮನಗಳನ್ನು
ನೆನಪುಗಳು ಹೊಸಿಯಲಿ

No comments:

Post a Comment