Tuesday, October 12, 2010

Life ಇಷ್ಟೇನೆ

ನಿಜ ಹೇಳಬೇಕು  ಅಂದ್ರೆ ರಾಜಕೀಯದ ಬಗ್ಗೆ ಹೆಚ್ಹೇನು ಗೊತ್ತಿಲ್ಲದ ಜನ ಕೊಡ ಇಂದು ವಿಧಾನ ಸೌಧದದ ಕಡೆ ಮುಖ ಮಾಡಿ ಉಗೀತಾ ಇದಾರೆ. ಇವರೆಲ್ಲ ಎಲೆ ಅಡಿಕೆ ಹಾಕೋವ್ರಾಗಿದ್ರೆ ವಿಧಾನ ಸೌಧದ ಕಲರ್ರು ಕೆಂಪಗಾಗಿ ಬಿಡ್ತಿತಿತ್ಹೆನೋ..  ನಾಯಕನಾದವನು ಸರಿ ಇದ್ರಲ್ವೆ ತನ್ನ ಕೆಳ್ಗಿರೋವ್ರುಗೆ ಹೇಳೋಕೆ ಆಗೋದು  ..  ಹೇಳಬೇಕಾದವನೇ  ಹಣ ಮಾಡೋಕೆ  ಪಂಚೆ ಕಟ್ಟಿ ನಿಂತರೆ  ಯಾರೇನ್ ಮಾಡಕ್ಕೆ  ಆಗುತ್ತೆ
ಅಲ್ಲ ನಮ್ಮ ಮಂತ್ರಿಗಳಿಗೆ ಏನಾಗಿದೆ .. ಒಬ್ಬನಾದ್ರು ಜನರ ಸ್ನೇಹ ಮಾಡಬೇಕು, ನಾಡಿಗೆ ಒಳ್ಳೆ ಹೆಸರ್ ತರಬೇಕು ಅನ್ನೋ ಮನಸಿಂದ ರಾಜಕೀಯಕ್ಕೆ ಇಳಿದಿಧಾನ .. ಕೆಲವ್ರು  ನಮ್ ಅಪ್ಪ ಅವ್ನೆ ಅಂತ ರಾಜಕೀಯಕ್ಕೆ ದುಮುಕಿದರೆ ಇನ್ ಕೆಲವರು ಮಾಡಕ್ಕೆ ಏನು ಕ್ಯಾಮೆ ಇಲ್ಲ ಅಂತ  ಚಡ್ಡಿ ಬಿಗಿದವರು .
 T .V ಇಂಟರ್ವ್ಯೂ ಗಳಲ್ಲಿ  ತಿಕಲು ಮುಂಡೆವು ತರ ಕಿತ್ತಡ್ಕೊಂಡು ನೋಡೋ ಪ್ರಜೆಗಳಿಗೆ ಬಿಟ್ಟಿ ಮಜಾ ಕೊಡೊ ಇವರಿಗೆ ಎಸ್ಟ್ ಉಗುದ್ರು ಒರಸಿಕೊಂಡು ಹೋಗ್ತರೆ  ..

ಇನ್ನು ನಮ್ ರಾಜ್ಯದ ಜನ ಏನು ಬಹಳ ಸಾಚ ಅಲ್ಲ .. ಎಲೆಕ್ಷನ್ ಟೈಮ್ ಅಲ್ಲಿ correct ಆಗಿ ವೋಟು  ಹಾಕ್ರೋ ಅಂದ್ರೆ ಮನೇಲಿ ಆರಾಮಾಗಿ ಮಲ್ಕೊತಾರೆ .. ಇಲ್ಲ ಅಂದ್ರೆ  "ಹೊದ್ಸಲ ನಿಮ್ಮ ಅಪ್ಪ ಚೆನ್ನಾಗಿ ಕಾಸ್ ಮಾಡವ್ನೆ ನಮ್ಗೆ ಒಂದ್ ವೋಟಿಗೆ ೫೦೦ ಕೊಡು" ಅಂತ ಹೇಳಿ  ನಾಮ ಎಳ್ಕೊತಾರೆ.

ಇನ್ನಾದ್ರು   ಜಾತಿ - ದುಡ್ಡು -ಗುಂಡು ಇವುಗಳಿಗೆ  ವೋಟು ಹಾಕೋದ್ ಬಿಡ್ರೋ ... ಇಲ್ಲ ಅಂದ್ರೆ ನಿಮ್ ಲೈಫ್  ಇಷ್ಟೇನೆ ...
 

Thursday, October 7, 2010

ಕಳವಳದ ಕವಿತೆ

  ಕಾಯ್ಕಿಣಿ ಅವರ ಸಾಹಿತ್ಯವೇ ಅಂತಹುದು . . ಸುಮ್ಮನೆ ಒರಗಿ ಕುಳಿತವನನ್ನು ತನ್ನೊಳಗೆ ಗುನುಗುವಂತೆ  ಮಾಡುವ ಅವರ ಕ್ರಿಯಾಶೀಲತೆ , ಪದಗಳ ಸರಳ ಜೋಡಣೆ ನನ್ನ ಸೆಳೆಯುವವು . ನಾ ತುಂಬಾ ಇಷ್ಟ ಪಡುವ ಸಾಹಿತಿ ಅವರು.
 ಆ ದಿನ ಬಸ್ನಲ್ಲಿ  ಕಿಟಕಿಯ ಕಡೆ ಏನೋ ನೋಡುತ  ನನ್ನನೆ ಮರೆತಾಗ , ಕಾಯ್ಕಿಣಿಯವರ  'ಅನಿಸುತಿದೆ ' ಹಾಡು  ಸನಿಹದ speaker  ನಿಂದ ಹೊರಬಂದು ನನ್ನನು ವಾಸ್ಥವಕೆ ಎಳೆ ತಂದಿತು .  ನಾನೂ ಏನಾದರೊಂದು ಗೀಚಲೇ  ಎಂದೆನಿಸಿ ಬರೆದಾಗ ಮೂಡಿದ  ಸಾಲುಗಳಿವು.


         ನಿನ್ನ ಕಹಿಗಳು ನನ್ನ ಕೂಡಲಿ
         ನನ್ನ ಸಿಹಿಗಳು ನಿನ್ನ ಸೇರಲಿ.
         ನಿನ್ನ  ಮೌನ ನನಗೆ ಕೇಳಲಿ
         ನನ್ನ ಸಂತಸ ನಿನ್ನದಾಗಲಿ .

         ನೀ ನಿಂತ  ಮಳೆಯಲಿ    
         ನಾ ನೆನೆಯಲಿ,
         ನನಗಿರುವ  ತಂಗಾಳಿ
         ನಿನಗೆಂದೇ  ಬೀಸಲಿ.
                   
Ps : ನಿಮಗೆ silly ಎನಿಸಲು ಉಗಿದು ಕಾಮೆಂಟ್ ಹಾಕಿ ...