ಕಾಯ್ಕಿಣಿ ಅವರ ಸಾಹಿತ್ಯವೇ ಅಂತಹುದು . . ಸುಮ್ಮನೆ ಒರಗಿ ಕುಳಿತವನನ್ನು ತನ್ನೊಳಗೆ ಗುನುಗುವಂತೆ ಮಾಡುವ ಅವರ ಕ್ರಿಯಾಶೀಲತೆ , ಪದಗಳ ಸರಳ ಜೋಡಣೆ ನನ್ನ ಸೆಳೆಯುವವು . ನಾ ತುಂಬಾ ಇಷ್ಟ ಪಡುವ ಸಾಹಿತಿ ಅವರು.
ಆ ದಿನ ಬಸ್ನಲ್ಲಿ ಕಿಟಕಿಯ ಕಡೆ ಏನೋ ನೋಡುತ ನನ್ನನೆ ಮರೆತಾಗ , ಕಾಯ್ಕಿಣಿಯವರ 'ಅನಿಸುತಿದೆ ' ಹಾಡು ಸನಿಹದ speaker ನಿಂದ ಹೊರಬಂದು ನನ್ನನು ವಾಸ್ಥವಕೆ ಎಳೆ ತಂದಿತು . ನಾನೂ ಏನಾದರೊಂದು ಗೀಚಲೇ ಎಂದೆನಿಸಿ ಬರೆದಾಗ ಮೂಡಿದ ಸಾಲುಗಳಿವು.
ನಿನ್ನ ಕಹಿಗಳು ನನ್ನ ಕೂಡಲಿ
ನನ್ನ ಸಿಹಿಗಳು ನಿನ್ನ ಸೇರಲಿ.
ನಿನ್ನ ಮೌನ ನನಗೆ ಕೇಳಲಿ
ನನ್ನ ಸಂತಸ ನಿನ್ನದಾಗಲಿ .
ನೀ ನಿಂತ ಮಳೆಯಲಿ
ನಾ ನೆನೆಯಲಿ,
ನನಗಿರುವ ತಂಗಾಳಿ
ನಿನಗೆಂದೇ ಬೀಸಲಿ.
Ps : ನಿಮಗೆ silly ಎನಿಸಲು ಉಗಿದು ಕಾಮೆಂಟ್ ಹಾಕಿ ...
No comments:
Post a Comment