Tuesday, July 2, 2013

ಪಲ್ಲವಿಗೆ ಚರಣ


ನೆನಪ ಮಧುರ ಮಳೆ
ಹನಿಯಾಯ್ತು ಮನದ ಇಳೆ
ಕಾರ್ಮೋಡದ ಕಣ್ಣ ಮುಂದೆ
ಕಾಮನ ಬಿಲ್ಲ ಕಲೆ....

ನಸುಕಲ್ಲೇ ನಾವೆದ್ದು
Accident
ಕನಸನು ಕಣ್ಣಲಿ ಹೊದ್ದು
ಸಾಗಿತ್ತು ನಮ್ಮ್ ಪ್ರೀತಿಪಯಣ
ಹುಡುಕುತ್ತಾ ಪಲ್ಲವಿಗೆ ಚರಣ

ದಾರಿಯ ನಡುವಲ್ಲಿ
ಎದುರಾದ ಆ ಬಂಡಿ
ಹರಿದಿತ್ತು ನೆತ್ತರವ ಚೆಲ್ಲಿ
ಮುದುಡಿತ್ತು ಹೂ ಅರಳದ ಬಳ್ಳಿ

ನನ್ನೆಲ್ಲ ಕಸುವನ್ನು
ಒಂದೇ ಉಸಿರಲಿ ಹಾಕಿ
ಬಳಿಸರಿದೆ ನನ್ನೊಲವ ಹುಡುಕಿ
ನನ್ನಿಂದಲೇ ನನ್ನ ನೂಕಿ



No comments:

Post a Comment