Tuesday, August 24, 2010

ಅಮ್ಮ ಹೇಳಿದ 8 ಸುಳ್ಳುಗಳು

 ನಾನು ಎಂ. ಆರ್  ಮಣಿಕಾಂತ್ ಅವರ ಲೇಖನ ಗಳನ್ನ  ವಿಜಯ ಕರ್ನಾಟಕದಲ್ಲಿ ಈ  ಹಿಂದೆ ಓದಿದ್ದೆ ,ಆದರೆ ಅವರ ಬರವಣಿಗೆಯನ್ನ ತೀರ  ಕಾತರದಿಂದ  ಕಾಯುವ  ಮಟ್ಟಿಗೆ ಅವು ನನ್ನನು ಕಾಡಿರಲಿಲ್ಲ , ಅಂಥಹ ಕೆಲಸವನ್ನ ಬಹುಷಃ ಈ  ಪುಸ್ತಕ ಮಾಡಿದೆ .
ಸರಿ ಸುಮಾರು ಮೂರು ತಿಂಗಳ ಗ್ಯಾಪ್ ನ  ನಂತರ ಓದಿದ ಪುಸ್ತಕ "ಅಮ್ಮ ಹೇಳಿದ ಎಂಟು ಸುಳ್ಳುಗಳು" .
ಅಲ್ಲಿ ದುಃಖದಿನೊಂದವರ  ಜೀವನ ಗಾಥೆ   ಗೆಲುವಿನಲ್ಲಿ ಕೊನೆಯಾದರೆ , ದೈಹಿಕ ವಿಕಲಾಂಗರ ಕಥೆಗಳು  ಸಾದನೆಯ ಶಿಕರಕ್ಕೆ ಬಂದು ನಿಲ್ಲುತ್ತವೆ.
 ಪ್ರತಿ ಪುಟದಲು ಓದುಗ ತನ್ನೊಳಗೆ ಯೋಚಿಸುವಂತೆ ಮಾಡುವ ಪುಸ್ತಕೆ ಅವನ ಕಣ್ಣಿರು ಅವನಿಗೆ ಅರಿವಿರದೆ ತನ್ನ ಮೇಲೆ ಜಾರುವಂತೆ ಮೋಡಿ ಮಾಡಿದೆ.
  ಅಬ್ದುಲ್ ಕಲಾಂ ಅವರು ಪ್ರತಿವಾದಿಸುವ POSITIVE Approach  ಇಲ್ಲಿ  ಅಕ್ಷರ ರೂಪ ಪಡೆದಿದೆ .  ಓದುವವನ ಜಾಡ್ಯ ಕೊಡವಿ  ಮುಂದೊಡಲು ಆತ್ಮವಿಶ್ವಾಸ ನೀಡುವ ಟಾನಿಕ್ ಇದಾದರೆ ,  ಅಮ್ಮನ ತಾಯ್ತನವ ಹೊಗಳಿ ಆಕೆಯ ಮರೆಯದಿರೆಂಬ ಸಂದೇಶ ಸಾರುವ ಹಿರಿಯಕ್ಕನಂತೆ ಕಿವಿ ಹಿಂಡಿದೆ. 
ಪರಸ್ತಳದಲಿರೋ ಮಗ ಓದಿದ ತರುವಾಯ  ತನ್ನ ಅಮ್ಮನ ಬಳಿ ಫೋನ್ ಮಾಡಿ ಮಾತನಾಡದೆ ಇರಲಾರ.

ಸಮಯ ಸಿಕ್ಕರೆ ಖಂಡಿತ ಓದಿ .. 

2 comments:

  1. namaskara sir,

    I have read the book twice.... The story selection is just too good.... The preface about prakash rai was just too good

    ReplyDelete
  2. Ya even i loved the preface.
    About reading it more than once .. I have no doubts in due..

    ReplyDelete